ಮುಕ್ತರಾಗೋಣ ಬನ್ನಿರಿ- HEMA MORAB

ಮುಕ್ತರಾಗೋಣ ಬನ್ನಿರಿ

ಮುಕ್ತರಾಗೋಣ ಬನ್ನಿರಿ

ಸದಾ ಶಾಂತರಾಗೋಣ ಬನ್ನಿರಿ

ಭಕ್ತಿ ಮಾರ್ಗದ ಮೂಲಕ

ಸಮಾಧಾನಿಯಾಗಲು ಅತ್ತಿಂದಿತ್ತ

ಹರಿಯುವ ಮನವನು ನಿಲ್ಲಿಸಿ

ಸದಾ ನಮ್ಮೊಳಗೆ ಇರಿಸಬೇಕು

ಕಾಮ ಕ್ರೋಧ, ಮದ, ಮತ್ಸರ,ಮೋಹ, ಲೋಭವನ್ನು

ಕಡಿಮೆ ಮಾಡುತ್ತ ಸಾಗಬೇಕು, ಇದನ್ನು ಸಾಧಿಸಲು

ನಿರಂತರ ಛಲ ಮತ್ತು ಆಸಕ್ತಿ ಬೇಕು

ನಂತರ ದಯೆ, ಪ್ರೀತಿ, ಕರುಣೆ, ವಾತ್ಸಲ್ಯವೆಂಬ

ಪೈರು ಬೆಳೆಯಬೇಕು

ಬೆಳೆದರಷ್ಟೆ ಸಾಲದು ಪೋಷಿಸಬೇಕು

ನಮ್ಮಲ್ಲಿರುವ ಕೀಳರಿಮೆ ಕಿತ್ತೊಗೆದು

ನಾವು ಪರಮಾತ್ಮನ ಎಳೆಯೆಂದು ತಿಳಿಯುವ

ಜ್ಞಾನ ಈ ಮನಕೆ ಬರಬೇಕು

ಬಸವಾದಿ ಶರಣರ ವಚನಗಳು ಮತ್ತು

ವಿಜಯಪುರದ ಸಿದ್ಧೇಶ್ವರ ಸ್ವಾಮೀಜಿ‌ಯವರ

ನುಡಿಗಳು ಮುಕ್ತಿ ಮಾರ್ಗದ ಪಠ್ಯಕ್ರಮಗಳು

ನಮ್ಮ ಜ್ಞಾನ ಗುರುವಿಗೆ ನಮಿಸಿ

ಶುದ್ಧಗೊಳಿಸಿದ ಮನದಲಿ

ಅವರ ನುಡಿಗಳನ್ನು ಇಳಿಸಬೇಕು

ಬೆಳಕಿನಂತೆ ವಿಶಾಲವಾಗಬೇಕು ಈ ಮನ

ಬೆಳಕಿನಂತೆ ಸ್ವಚ್ಛವಾಗಬೇಕು, ಬೆಳಕಿನಂತೆ

ಏನನ್ನು ಅಂಟಿಸಿಕೊಳ್ಳದೆ , ನಾನು ನಾನಾಗಿರಬೇಕು

ಸಾಧನೆಯಲ್ಲಿ ಆಕಸ್ಮಿಕ ಕ್ಲೇಶಗಳು ಮನಕೆ ತಾಗಿದರೆ

ಗಾಳಿಗೆ ಮರ ಅಲ್ಲಾಡಿ, ಮತ್ತೆ ಸ್ಥಿರವಾದಂತೆ

ಮತ್ತೆ ಮನ ಸುಧಾರಿಸಿ, ಸ್ಥಿರವಾಗಿಸಗಬೇಕು

ಸಾಧಿಸಿದೆನೆಂದು ತಿಳಿದು ನಿಂತು ನೀರಾಗಬಾರದು

ಸಾಧನೆಯು ಹರಿಯುವ ನೀರಿನ ಹಾಗೆ

ಪರಮಾತ್ಮನಲ್ಲಿ ಲೀನವಾಗುವರೆಗೂ ನಿರಂತರವಾಗಿರಬೇಕು

ಆಯುಷ್ಯವೆಂಬ ತೈಲ ತೀರುವ ಮುನ್ನ

ಭಕ್ತಿ ಪಥದಲ್ಲಿ ಸಾಗಿ

ಆತ್ಮಜ್ಞಾನ ಮಾಡಿಕೊಳ್ಳಬೇಕು

ದಿನ, ತಿಂಗಳು, ವರ್ಷಗಳು ಕಳೆದಂತೆ

ಮನ ಶಾಂತಿ ಸಮಾಧಾನವಾದ ನಂತರವೂ

ಜಾಗೃತಿಯಿಂದ ಪೋಷಿಸಬೇಕು.