ಇರಬೇಕು ನೀ ಇರಬೇಕು ನೀ ಎಲೆ ಮರುಳು ಪ್ರಾಣಿ
ಹುಚ್ಚೆದ್ದು ಪಥ ಹಿಡಿದು ಬಳಿ ಸುಳಿವು ತನಕ
ದಿನದಿನವು ಬೇಗೆದ್ದು ಒಗ್ಗದರ ಬಳಿ ಸರಿದು
ಬೇಡಿ ಓಲೈಸಿ ಅದನು
ಬೇಕದ್ದು ಬೇಡದ್ದು ಯಾವುದದು ಯಾವುದದು
ಎಂಬೆಲ್ಲ ತಿಳುವಳಿಕೆ ಬಿದ್ದು
ಏತಕ್ಕೆ ಮಾಡುತಿಹೆ ಏನನ್ನು ಗಳಿಸುತಿಹೆ
ಕೂಗಾಡಿ ಬಾಯಾರಿಕೆ
ಇಂತೆಷ್ಟು ಈ ಪಯಣ ಎಲ್ಲಿಹುದೊ ಕಡೆ ಸದನ
ಬೇಸತ್ತೆ ಅರಸಿ ಅದನ
ಮನಮೋಹಕ ಈ ಕನಕ ವೈಢೂರ್ಯ ಸರ ಪದಕ
ಬಚ್ಚಿಟ್ಟು ಪಡಲಾರೆ ಕಳೆದು ಮರುಕ
ಸೋತು ಸುಣ್ಣಾದೆನೋ ಏನೆಂಬೆ ಈ ಬದುಕು
ದಯೆತೋರಿ ಸಾಗುಹಾಕೆಂತೆಂಬ ತನಕ
ಇರಬೇಕು ನೀ.....
ಪ್ರಗಲ್ಭ. ಆರ್. ಎಸ್.