ಈ ಪ್ರಪಂಚದಲ್ಲಿ ನನ್ನ ಪ್ರಪಂಚ ನನ್ನಪ್ಪ
ನಾ ಬೇಡದೆಯೆ ದೈವವಿತ್ತ ವರ ಇವ
ಅಂದು ಎಲ್ಲರ ಬಳಿ ಬೇಡಿದ ಕೈಗಳು
ಇಂದು ನನಗೆ ಕೇಳುವ ಮುನ್ನವೇ ಎಲ್ಲವನೂ ಕೊಡುವ ಕೈಗಳು
ಅವನು ಹುಟ್ಟಿ ಬೆಳೆದದ್ದು ಗುಬ್ಬಿಯ ಗೂಡೇ ಆದರೂ
ನನಗಾಗಿ ತ್ಯಾಗ -ಪ್ರೀತಿಯ ಕೋಟೆ ಕಟ್ಟಿದವ
ಅತ್ತಾಗ ಕಣ್ಣೀರ ಒರೆಸುವವನಲ್ಲ
ಕಣ್ಣೀರೇ ಬಾರದ ಹಾಗೆ ಕಾದ ಜೀವ
ಹಸಿವ ನೀಗಿಸುವನಲ್ಲ
ಹಸಿವು ಎಂದರೆ ಅರ್ಥವೇ ಆಗದ ಹಾಗೆ ನೋಡಿಕೊಂಡವ
ಅಪ್ಪಾ ಅಂದರೆ ಆಗಸ.....
ಅವನೆಂದಿಗೂ ನನ್ನ ಅರಸ.......