ಅವಳೊಂದು ಮರುಭೂಮಿಯ ಅಪೂರ್ವ ಹೂವು,
ಅಜ್ಞಾತ ಅವಳ ಇರುವಿಕೆ,
ಕಾಣ ಸಿಗಳು ಬಹು ಜನಕ್ಕೆ,
ಬಾಡದಿರುವ ಎಸಲುಗಳವಳದು
ಎಂದಿಗೂ ಮುದುಡಿ ಹೋಗದು,
ದಿನ ಸುಡುವ ಬಿರುಗಾಳಿಯ
ಬೆಂಕಿಯ ಸುಳಿಗೆ ತಗ್ಗದೆ ಬದುಕಿಹಳು...
ಬಿಡುವಿಲ್ಲದ ಮಾರುಕಟ್ಟೆಯ ಹೂಗುಚ್ಛದಲಿ
ಎಲ್ಲರ ಕಣ್ಣ ಸೆಳೆವ,
ಕಡು ಕಾಂತಿಯುತ ಬಣ್ಣದವಳಲ್ಲ...
ಬರಡು ಭೂಮಿಯ ಮರದ ತುದಿಯಲ್ಲಿ
ಇಣುಕುತ ಇರುವವಳು...
ಒರಟುತನವ ಬದಿಗೊತ್ತಿ,
ಬದುಕಿನ ಪ್ರತಿಕೂಲ ಕ್ಷಣದಲ್ಲು
ಸ್ತಬ್ಧವಾಗಿಹಳು...
ತನ್ನ ಪ್ರಕ್ಷುಬ್ಧತೆಯ ಎಂದಿಗೂ ತೋರದೆ
ಕೃಶ ಕೊಂಬೆಗಳ ಸೀಳುತಿಹ
ಗೃಧ್ರನಿಗು ಆಸರೆಯ ಕೊಡುವ
ಅವಳೊಂದು ಮರುಭೂಮಿಯ ಅಪೂರ್ವ ಹೂವು...