ಮುಗಿಲತ್ತ ದಿಟ್ಟಿಸುತ್ತಾ,
ಗಾಳಿಯೊಂದಿಗೆ ನನ್ನ ನಿಟ್ಟುಸಿರು ಬೆರೆತು ಹೋಗುವುದ ನೋಡುತ್ತಾ ,
ನೆನಪುಗಳ ಗುಡ್ಡೆ ಕೆದರಿ ಒಮ್ಮೆಲೇ ಎಲ್ಲ ಮೆಲುಕು ಹಾಕಿದಾಗ ...
ಮೊದಲು ಎದುರಾಗಿದ್ದು,
ಬಾಲ್ಯದ ಬಾಲಿಶ ದಿನಗಳು,
ಮುಗ್ಧ ಸ್ವಪ್ನಗಳು,
ಮುಕ್ತ ಹಾಸ
ಏಳು ಬೀಳು
ಮುಗುಳ್ನಗುತ್ತಲೇ ಅಂಗೈ ಒದರಿ ಏಳಲು ಮಾಡಿದ ಪ್ರಯಾಸ..
ಮತ್ತೆ ರಾಚಿದ್ದು,
ವಯಸ್ಸಿನ ಜೊತೆಗೆ ಬೆಳದು ಆವರಿಸಿದ ಆಕಾಂಕ್ಷೆ,
ಆಚಾರ ವಿಚಾರಗಳ ಹೊಸಿಲು ದಾಟಲೋ ಬೇಡವವೋಯೆನುವ,
ದ್ವಂದಲ್ಲಿ ಆಡಿದ ಜೀವನದ ಕುಂಟೆ ಬಿಲ್ಲೆ.
ಗಗನವೇ ಚೀರಿ ಬಿಡುವೆ ಯೆನುವ ಉತ್ಸಾಹದ ಕಿಚ್ಚು
ಆಗಲೇ ಹತ್ತದ್ದು ಬರೆಯುವ ಹುಚ್ಚು.
ಪದಗಳ ನಡುವೆ ನನ್ನ ಕಣ್ಣ ಮುಚ್ಚಾಲೆ,
ಭಾವನೆಗಳ ಚೌಕಿಟ್ಟಿನಲ್ಲಿ ಆಡಿದ ಚೌಕ ಬಾರಾ.
ಇದ ,ನೆನೆಯುತ್ತಲೇ,
ಇಂದು ಕೈಜಾರಿದ ಅನುಭೂತಿ,
ಉಳಿದಿದ್ದ ಚೂರನ್ನು ಬಾಚಲು ಮಾಡಿದ ಮುಷ್ಟಿ
ನಾಳೆಂಬ ಹಂಬಲ,
ಗುರಿ ತಲಪುವ ಛಲ,
ಮಧ್ಯೆ ನುಸುಳಿ ಮುಸುಕು ಹಾಕಿದ ಆಲಸ್ಯ,
ಮಂಕು ಕವಿದು ಹಿಡಿದ ಜಾಡ್ಯ
ಅದರೊಡನೆಯೇ ಮೈಲಿಗಲ್ಲು ದಾಟುತ್ತ
ಕುಂಟುತ್ತ ಎಡುವುತ್ತ ಎಗುರುತ್ತ ಚಿಮ್ಮುತ್ತ
ನಲಿವು ಗೆಲವು,ನೋವು ,ಸೋಲುಗಳ ಸಾಕ್ಷಾತ್ಕಾರ.