ಜಗತ್ತಿಗೆಲ್ಲಾ ಅನ್ನದಾತರು,
ಅವರೇ ನಮ್ಮ ಹೆಮ್ಮೆಯ ರೈತರು.
ಭಾರತ ಮಾತೆಯ ರಕ್ಷಕರು,
ಅವರೇ ನಮ್ಮ ದೇಶದ ಸೈನಿಕರು.
ಜನರ ಹಸಿವನ್ನು ನೀಗಿಸದೇ ಇರುವುದಿಲ್ಲ,
ತಿನ್ನುವ ಅನ್ನದಲ್ಲಿ ವಿಷವನ್ನು ಬೇರೆಸುವುದಿಲ್ಲ.
ಶತ್ರುಗಳ ಗುಂಡೇಟಿಗೆ ಹೆದರುವುದಿಲ್ಲ,
ದೇಶ ರಕ್ಷಣೆಯನ್ನು ಮರೆಯುವುದಿಲ್ಲ.
ನಮ್ಮ ದೇಶವು ರೈತ ಪ್ರಧಾನ,
ನಮ್ಮ ರೈತರಿಗೊಂದು ನನ್ನಯ ನಮನ.
ದೇಶವನ್ನು ಕಾಯುವರು ಪ್ರತಿದಿನ,
ನಮ್ಮ ಯೋಧರಿಗಿಲ್ಲ ಯಾರು ಸಮಾನ.
ಮಳೆಯಿಲ್ಲ, ಬೆಳೆಯಿಲ್ಲ ಕಿಂಚಿತ್ತು ಫಲವಿಲ್ಲ,
ಆದರೂ ತಮ್ಮ ಶ್ರಮವ ಬಿಡಲಿಲ್ಲ.
ವೈರಿಗಳ ಗುಂಡೇಟಿಗೆ ಎದೆಯು ಸೀಳಿತಲ್ಲ,
ಆದರೂ ವೈರಿಗಳ ಕೊಲ್ಲದೆ ಬಿಡಲಿಲ್ಲ.
ಪ್ರತಿಯೊಂದು ಅನ್ನದ ಆಗುಳಿನಲ್ಲಿಯೂ,
ಅಡಗಿರುವುದು ರೈತರ ಶ್ರಮ.
ಪ್ರತಿಯೊಬ್ಬ ಸೈನಿಕನ ಕಣಕಣದಲ್ಲೂ,
ಅಡಗಿರುವುದು ದೇಶ ಪ್ರೇಮ.
ಬೆಳೆಗಳನ್ನು ಬೆಳೆದನು,
ಭೂಮಿಯನ್ನು ಹಸಿರಾಗಿಸಿದನು.
ಹಿಮಗಳ ಮಧ್ಯ ನುಸುಳಿ ವೈರಿಗಳ ಕೊಂದನು,
ಭಾರತ ಮಾತೆಯ ಹೆಮ್ಮೆಯ ಪುತ್ರನು.
ಕೈ ಕೆಸರಾದರೆ ಬಾಯಿ ಮೊಸರು,
ಎನ್ನುತ ಹೊಲದಲ್ಲಿ ದುಡಿಯುವರು.
ಎಂದೆಂದಿಗೂ ದೇಶ ಸೇವೆಗೆ ಸಿದ್ಧ,
ವೈರಿಗಳ ವಿರುದ್ಧ ಮಾಡುವರು ಯುದ್ಧ.
ಕಷ್ಟಗಳನ್ನೆಲ್ಲಾ ನುಂಗುವರು,
ಲೋಕಕೆ ಅನ್ನವನ್ನು ನೀಡುವರು.
ನಮ್ಮಯ ಸೈನಿಕ ನಮ್ಮಯ ರಕ್ಷಕ,
ಭಾರತ ಮಾತೆಯ ಹೆಮ್ಮೆಯ ಸೇವಕ.